Friday, January 11, 2008

ನಮ್ಮವರಿಗೆ ನಾವೇ...

ಮಾಹಿತಿ ತಂತ್ರಜ್ಞಾನ, ಉನ್ನತ ಕ್ಷೇತ್ರಗಳಲ್ಲಿ ಕನ್ನಡಿಗರು ಕಾಣಸಿಗುವುದಿಲ್ಲ. ಇದಕ್ಕೆ ಕಾರಣಗಳು:
ಹೆಚ್ಚಾಗಿ, ಪದವೀಧರ ಕನ್ನಡಿಗರಲ್ಲಿ ಆಂಗ್ಲ ಭಾಷೆಯ ಉಪಯೋಗ ಮತ್ತು ಅದರಿಂದ ಉಂಟಾಗಬಹುದಾದ ಸಂವಹನದ ಕೊರತೆಯನ್ನೇ ಮುಖ್ಯ ಕಾರಣವಾಗಿರಿಸಿ, ಬೇರೆ ಭಾಗದ ಜನರನ್ನೇ ಉದ್ಯೋಗಕ್ಕಾಗಿ ತೆಗೆದುಕೊಳ್ಳುತ್ತಿರುವುದು ಮತ್ತು ಅಧಿಕಾರಿಗಳು ತಮ್ಮ ಭಾಗದ ಜನರನ್ನು ನೇಮಕ ಮಾಡಿಕೊಳ್ಳುವುದು.
ಎಷ್ಟೋ ಸಂದರ್ಭಗಳಲ್ಲಿ ಸಂಸ್ಥೆಗಳು, ತಮ್ಮ ಉದ್ಯೊಗಿಗಳ ಮೂಲಕವೇ, ಹೊಸಬರನ್ನು ತೆಗೆದುಕೊಳ್ಳುವುದರಿಂದ ಹೊರಗೆ ಇರುವ ಕನ್ನಡಿಗರಿಗೆ, ಸ್ಪರ್ಧಿಸುವ ಅವಕಾಶವು ತಪ್ಪಿದಂತೆ ಆಗುತ್ತದೆ.
ಆದರೆ ಇತ್ತೀಚೆಗೆ ಈ ಪರಿಪಾಟ ಹೆಚ್ಚಾಗಿದೆ. ಇದರಿಂದ ಪ್ರತಿಭಾವಂತ ಕನ್ನಡಿಗರಿಗೆ ಕೆಲಸ ಸಿಗುವುದು ಕಷ್ಟವಾಗಿದೆ. ಇನ್ನೊಂದು ಅಘಾತಕಾರಿ ವಿಷಯವೆಂದರೆ ಅಷ್ಟೊ ಇಷ್ಟೊ ಇರುವವರಲ್ಲಿ ಇಚ್ಚಾಶಕ್ತಿ ಕೊರತೆ...ಇತ್ತ ಸರಕಾರ ಕೂಡ ಆಸಕ್ತಿ ತೋರುತ್ತಿಲ್ಲ, ಹಾಗೊಂದು ಇಗೊಂದು ಹೇಳಿಕೆ ನೀಡಿ ಸುಮ್ಮನಾಗುತ್ತಿದೆ. ಈಗಾದರೆ ನಮ್ಮ ಕನ್ನಡಿಗರ ಗತಿ ಏನೂ?ಈಗಲಾದರೂ ಸರಕಾರ, ಜನಪ್ರತಿನಿಗಳು ಎಚ್ಚೆತ್ತುಕೊಳ್ಳಬೇಕು. ಎಲ್ಲಾದಕ್ಕಿಂತ ಮುಖ್ಯ ಈಗಿನ ಯುವಕರ ಮನಸ್ಥಿ ಬದಲಾಗಬೇಕು. ನಮ್ಮವರಲ್ಲಿ ಈ ಅರಿವು ಮೂಡಿದಾಗ ಮಾತ್ರ "ನಮ್ಮವರಿಗೆ ನಾವು" ಆಗಲು ಸಾಧ್ಯ.....